ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಎಕ್ಸೆಲ್ ಕಾಲೇಜಿನಲ್ಲಿ ನಂದಿನಿ ಮಾರಾಟ ಮಳಿಗೆ ಉದ್ಘಾಟನೆ
ಗುರುವಾಯನಕೆರೆ:ಒಕ್ಕೂಟದ ವ್ಯಾಪ್ತಿಯಲ್ಲಿ ಮಾರುಕಟ್ಟೆ ಅಭಿವೃದ್ಧಿಪಡಿಸಲು ನೂತನ ಪಾರ್ಲರ್/ಫ್ರಾಂಚೈಸ್ ಸ್ಥಾಪಿಸುವ ಸಲುವಾಗಿ ಕರ್ನಾಟಕ ರಾಜ್ಯಾದ್ಯಂತ 500ಕ್ಕೂ ಮೇಲ್ಪಟ್ಟು ಪಾರ್ಲರ್/ಫ್ರಾಂಚೈಸ್ ಗಳನ್ನು ಹೊಸದಾಗಿ ಸ್ಥಾಪಿಸಿ ಕಲ್ಯಾಣ ವಿಮೋಚನಾ ದಿನಾಚರಣೆಯ ಸಂದರ್ಭದಲ್ಲಿ ಗುಲ್ಬರ್ಗಾದಿಂದ ಆನ್ಲೈನ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅರಮಲೆಬೆಟ್ಟ ಕ್ಯಾಂಪಸ್ ನಲ್ಲಿ ನಿರ್ಮಿಸಿದ ಕೆಎಂಎಫ್ ನಂದಿನಿ ಮಾರಾಟ ಮಳಿಗೆಯನ್ನು ಸೆ.18 ರಂದು ಉದ್ಘಾಟಿಸಿದರು.
ಐದು ಸಾವಿರ ವಿದ್ಯಾರ್ಥಿಗಳಿರುವ ಎಕ್ಸೆಲ್ ಕಾಲೇಜಿನಿಲ್ಲಿ ಪಾರ್ಲರ್ ಪ್ರಾರಂಭಗೊಂಡಿದೆ.ದೇಶದ್ಯಾಂತ ನಂದಿನಿ ಉತ್ಪಾದನೆಗೆ ಉತ್ತಮ ಬೇಡಿಕೆಯಿದ್ದು ಆರೋಗ್ಯಪೂರ್ಣ ಕ್ಷೀರಾ ಪದಾರ್ಥಗಳನ್ನು ಇಲ್ಲಿ ಪಡೆಯಬಹುದು.ಹಾಲು ಒಕ್ಕೂಟ ರೈತರ ಸಂಸ್ಥೆ.ವ್ಯಾಪರದಲ್ಲಿ ಬಂದ ಲಾಭಾಂಶ ರೈತರಿಗೆ ಹೋಗುತ್ತದೆ.ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು ನಮ್ಮೊಂದಿಗೆ ಕೈ ಜೋಡಿಸಿದ್ದು ಸಂತಸ ತಂದಿದೆ. ಹಾಲು,ತುಪ್ಪ,ಮೊಸರು ರೈತರಿಗೆ ಶಕ್ತಿ ನೀಡುವ ಉತ್ಪನ್ನ.ಬೆಳ್ತಂಗಡಿ ಅತೀ ಹೆಚ್ಚು ಹಾಲು ಉತ್ಫಾದನೆ ಮಾಡುವ ಕ್ಷೇತ್ರವಾಗಿದ್ದು ಜಿಲ್ಲೆಯ ಸಮುದಾಯದ ಬದುಕಿಗೆ ಶಕ್ತಿ ನೀಡಿದೆ
ನಂದಿನಿ ಬ್ರ್ಯಾಂಡ್ನ ಹಾಲು, ಮೊಸರು, ತುಪ್ಪ ಬೆಣ್ಣೆ ಹಾಗು ಇತರೆ ಉತ್ಪನ್ನಗಳು ಕರ್ನಾಕದಲ್ಲಿ ಉತ್ತಮ ಗುಣಮಟ್ಟದ ಹೆಗ್ಗುರುತನ್ನ ಹೊಂದಿವೆ.ಸಿದ್ದವನದಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಹಾಲು ಕರೆದು ಮಾರಾಟ ಮಾಡುತ್ತಿದ್ದೆ.ನಮ್ಮ ಮನೆಯಲ್ಲಿಯೂ ದನಗಳಿವೆ. ಹಾಗಾಗಿ ಹಾಲಿನ ಉತ್ಪನ್ನಗಳಿಂದ ಲಕ್ಷಾಂತರ ಕುಟುಂಬಗಳು ಇಂದು ಜೀವನ ನಡೆಸುತ್ತಿದೆ. ನಮ್ಮ ಸಂಸ್ಥೆಯಲ್ಲಿಯೂ ನಂದಿನಿ ಮಳಿಗೆಯ ಪ್ರಾರಂಭದಿಂದ ಸಂಭ್ರಮ ಹೆಚ್ಚಿದೆ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.